4th October 2024
ರಾಯಚೂರು, ಅ.02: ರಾಯಚೂರಿನಲ್ಲಿ ಸಹಕಾರ ಇಲಾಖೆಯ ಆರ್ಡಿಸಿಸಿ ಬ್ಯಾಂಕ್(Rdcc Bank)ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿದೆ. ಆರ್ಡಿಸಿಸಿಯ ರಾಯಚೂರು(Raichur) ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದ್ಗಲ್ ಪಟ್ಟಣದ ಶಾಖೆಯಲ್ಲಿ ಒಟ್ಟು 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮ ವರ್ಗಾವಣೆ ಆಗಿರುವ ಆರೋಪ ಕೇಳಿ ಬಂದಿತ್ತು. ಇಷ್ಟು ದೊಡ್ಡ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿದಾಗ ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪನೇ ಕಿಂಗ್ ಪಿನ್ ಎನ್ನುವುದು ಇಲಾಖಾ ತನಿಖೆಯಲ್ಲಿ ಬಯಲಾಗಿದೆ. ನಿಯಮಗಳನ್ನ ಉಲ್ಲಂಘಿಸಿ ನೇರವಾಗಿ ಆರ್ಡಿಸಿಸಿ ಬ್ಯಾಂಕ್ನಿಂದ ಹಣ ಪಾವತಿಸಿರುವುದು ತಿಳಿದುಬಂದಿದೆ.
ಹೌದು, ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪ ಈ ಹಣ ಗುಳುಂ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ಬ್ಯಾಂಕ್ನ 11 ಜನ ಸಿಬ್ಬಂದಿಯ ಐಡಿ ಬಳಸಿ, ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆಯಾಗಿದ್ದು ಇಲಾಖಾ ತನಿಖೆಯಲ್ಲಿ ಗೊತ್ತಾಗಿದೆ. 2017 ಜೂನ್ನಿಂದ ಸೆಪ್ಟೆಂಬರ್ 2020 ರವರೆಗೂ ಹಂತ ಹಂತವಾಗಿ ಹಣ ಅಬೇಸ್ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶವಾದ ಬೆನ್ನಲ್ಲೇ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಿದರು. ಈ ಇಲಾಖಾ ತನಿಖೆ ವೇಳೆ ಒಟ್ಟು 2 ಕೋಟಿ 20 ಲಕ್ಷ ಹಣ ದುರ್ಬಳಕೆ ಪತ್ತೆಯಾಗಿದೆ. ಈ ಬಗ್ಗೆ ಕೊಪ್ಪಳ-ರಾಯಚೂರು ಆರ್ಡಿಸಿಸಿ ಬ್ಯಾಂಕ್ನ ಚೇರ್ಮನ್ ವಿಶ್ವನಾಥ್ ಪಾಟೀಲ್ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕ್ರಮ ಕೈಗೊಳ್ಳೋ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕೋಟ್ಯಂತರ ರೂ. ಅವ್ಯವಹಾರ ಆರೋಪ; ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳ ದಾಳಿ
ಇತ್ತ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಮುದಗಲ್ ಶಾಖೆ ಮ್ಯಾನೇಜರ್ ಶಿವಪುತ್ರಪ್ಪರನ್ನ ಅಮಾನತ್ತು ಮಾಡಿ ಆದೇಶಿಸಿಲಾಗಿದೆ. ಅಲ್ಲದೇ ಅವ್ಯವಹಾರವಾಗಿರುವ ಕೋಟಿ ಕೋಟಿ ಹಣವನ್ನ ಆಡಳಿತ ವರ್ಗ ಹೇಗೆ ರಿಕವರಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಯಚೂರು ಜಿಲ್ಲಾ ಬಂದ್ ಹೋರಾಟಕ್ಕೆ ಸಿಪಿಐಎಂ ರಾಯಚೂರು ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲಿಸಿದೆ .ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳು ಕೇವಲ ಶೋಷಿತರ ಪರ ದಮನಿತರ ಪರ ವೇದಿಕೆಗಳಲ್ಲಿ ಭಾಷಣ ಮಾಡುವದ್ದರಿಂದ ಅವರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಕೂಡಲ್ಲೇ ಸರ್ಕಾರಕ್ಕೆ ನಿಜವಾಗಿ ಶೋಷಿತರ. ದಲಿತ.ದಮನಿತರ ಬಗ್ಗೆ ಕಾಳಜಿ ಇದ್ದರೆ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಕೇವಲ ಸರ್ಕಾರ ಸಂಸ್ದೆಗಳಲ್ಲಿ ಅಷ್ಟೇ ಅಲ್ಲ ಖಾಸಗಿ ಸಂಸ್ದೆಗಳಲ್ಲಿ ಕೂಡ ಜಾರಿಗೆ ತರಬೇಕು. ಇದರಲ್ಲಿ ತಮ್ಮ ಸರ್ಕಾರ ಇದೇ ರೀತಿ ವಿಳಂಬ ಧೋರಣೆ ಮಾಡಿದಲ್ಲಿ ಇಡೀ ದಲಿತರ ಮತ್ತು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಸಿಪಿಐಎಂ ಪಕ್ಷ ಮುಂದಾಗಬೇಕಾಗುತ್ತಾದೆ. ಎಂದು ತಿಳಿಸುತ್ತಾದೆ.
ಇಂದು ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ಹೋರಾಟಕ್ಕೆ ಬೆಂಬಲಿಸಿ.ಪಕ್ಷದ ಜಿಲ್ಲಾ ಕಾರ್ಯದಶಿ ಕೆ.ಜಿ.ವಿರೇಶ.ಹೆಚ್.ಪದ್ಮಾ.ಕರಿ
ಯಪ್ಪ ಹಚ್ವೋಳಿ.ಡಿ.ಎಸ್.ಶರಣಬವ.ನಾಗೇಂದ್ರ.ಗೋಕಾರಮ್ಮ.ಸರೋಜಮ್ಮ. ಜಿಲಾನಿ ಪಾಷ ಗೋವಿಂದ ಬಸಂತಿ. ಸುಜಾತ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಪಕ್ಷದ ಸದಸ್ಯರು ಭಾಗವಹಿಸಿದರು
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ